Tuesday, July 27, 2010

ಒಲಿದು ಬಂದ ಒಲವೆ ನೀನು

ಒಲಿದು ಬಂದ ಒಲವೆ ನೀನು

ಎಂದೋ ನೋಡಿದ
ನೆನಪು ಎಲ್ಲೋ ಕೂಡಿದ ನೆನಪು
ನೆನಪಿನ ನೆನಪಲ್ಲೆ
ಮರೆತ ಮರೆವಿನ ಸುಳಿಹು ನೀನು " ೧ "

ಕಾಂತಿಯಿಲ್ಲದ ಚೆಂದ್ರ
ಹೊಳೆವ ಗುಟ್ಟಾದ ಕಂಡೆ
ನನ್ನ ಕಣ್ಣಲಿ ಸುಳಿದ
ನಿನ್ನ ಕಣ್ಣ ಮಿಂಚಿನಿಂದ " ೨ "

ಕೋಟಿ ತಾರೆಯ ಮಿಂಚು
ಸುಳಿದು ಕಣ್ಣಂಚಿನಲಿ
ಸೆಳೆಯುತಿದೆ ಎನ್ನ
ನಿನ್ನ ಸೂಜಿಗಲ್ಲಿನ ನಿಲುವು " ೩ "

ಹಗಲು ಇರುಳುಗಳಲ್ಲಿ
ಬದುಕ ದ್ವಂದ್ವಗಳಲ್ಲಿ
ಕಳೆದ ನಿನ್ನೆಯ ನೆನಪ
ಭರವಸೆಯ ಬೆಳಕು ನೀನು " ೪ "

ಎಲ್ಲಿ ಬದುಕಲಿ ಹೇಗೆ ಬದುಕಲಿ
ಎಂದಿತ್ತು ಬಾಳ ನಿಲುವು
ಬದುಕಿಗೊಂದು ನೆಲುವ ತೋರೆ
ಬಂದ ಬದಲಾವಣೆಯೇ ನೀನು " ೫ "

ಮೋಸವಿಲ್ಲದ ಮಾತು
ಕಪತವಿಲ್ಲದ ನೋಟ
ಎಳೆಗರುವ ಎತ್ತಾಗಿಸಲು
ಒಲಿದು ಬಂದ ಒಲವೇ ನೀನು " ೬ "

2 comments:

ಮಂಜು said...

ಪದ್ಯ ಚೆನ್ನಾಗಿದೆ ಸಾರ್. ನೀವು ಪದ್ಯಬರೆಯುವುದನ್ನು ಪ್ರಧಾನ ಭೂಮಿಕೆಗೆ ತಂದರೆ ಒಳ್ಳೆಯ ಪದ್ಯಗಳನ್ನು ಬರೆಯಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ

JP Shivakavi said...

DhanyavaadagaLu