Thursday, December 6, 2012

ನಗರದೊಂದು ಮೂಲೆಯಲ್ಲಿ

ನಗರದೊಂದು ಮೂಲೆಯಲ್ಲಿ

ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ
ಅವನ ಕಂಡ ದಿನವು  ನನ್ನ ಪಾಲಿಗದುವೆ ಹಬ್ಬ
ದಿನಗಳುರುಳುತಿಹವು, ವಾರಗಳ ಹಾಗೆ ಓಡಿ
ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ

ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು ಇನ್ನು
ದಿನ ದಿನಗಳು ಗತಿಸುಟಿವೆ ಎದುರಿಸುತ ಬದುಕ ಪೈಪೋಟಿಯನು
ಆದರವ ತಿಳಿದುಕೊಂಡಿರುವ, ನಾ ಇನ್ನು ಅವನ ನೆನೆವೆನೆಂದು
ಕಳೆದ ದಿನಗಳಲ್ಲಿ ಅವನ ಮನೆಗೆ ನಾ ನಿಟ್ಟ ಭೆಟ್ಟಿ ನೆನೆದು

ಬಾಲ್ಯದಲ್ಲಿ ಬರುತಲಿದ್ದ ಅವನೂ ಕೂಡ ನಮ್ಮ ಮನೆಗೆ
ಆದರೀಗ ಮುಳುಗಿರುವನನೂ, ಮೈಮರೆತಿಹನು
ಬದುಕಿನ ಈ ಮೂರ್ಖ ಆಟದಲ್ಲಿ
ಹೆಸರನೊಂದು ಮಾಡುವ ಹುಚ್ಚು ಆಸೆಯಲ್ಲಿ

ನಾ ನನ್ನುವೆ! "ನಾಳೆ ಅವಗೆ ಕರೆಯಮಾಡುವೆ,
ತೂರಬೇಕಲ್ಲ ನಾ ಇನ್ನೂ ಅವನ ನೆನೆವೆನೆಂದು"
ನಾಳೆ ಬರುವುದು, ಮುಗಿಯದಂತೆ ಮತ್ತೆ ಮತ್ತೆ
ನಮ್ಮ ನಡುವಿನಂತರವು ಮಾತ್ರ ಇರುವಷ್ಟಕ್ಕೆ ಉಳಿಯಲಿಲ್ಲ

ನಗರದೊಂದು ಮೂಲೆಯಲ್ಲಿ, ಕೆಲವೇ ಗಾವುದ ದೂರದಲ್ಲಿ
ತಂತಿ ಬಂತು ಸುದ್ದಿ ತಂತು, "ಸ್ವಾಮೀ ನಿಮ್ಮ ಗೆಳೆಯ ಸತ್ತನಲ್ಲಿ"
ಇದನು ತಾನೇ, ನಾವು ಪಡೆವುದು ಕೊನೆಯಗಳಿಗೆಯಲ್ಲಿ
ನಗರದೊಂದು ಮೂಲೆಯಲ್ಲಿ , ಕಳೆದ ಹೋದ ಗೆಳೆಯನಲ್ಲಿ

 (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿತ ಕವನ )
ಮೂಲ: Around the Corner by Charles Hanson Towne

-ಜಯಪ್ರಕಾಶ್ ಶಿವಕವಿ

2 comments:

Girish Achar said...

ಆಹಾ ಜಯಪ್ರಕಾಶ ....

ನಿಮ್ಮ ಈ ಕವನವನೋದುತನೋದುತ ನನ್ನ್ಕೆಲ ಕ್ಷಣಗಳ ಅವನಲೋಕನವ ಮಾಡಿಹೆ ನಾನಿಲ್ಲಿ

ಎಂತಹ ಸತ್ಯವ ರಚಿಸಿಹನೀತನೆಂದು ಓದುತ ...ಮಿಂದು ಹೋಗಿರಲು..... ಕೊನೆಯ ಕುರಳನೀಕ್ಷಿಸಿ ನನ್ನ ಕಣ್ಣು ಮುಳುಗಿತು ಕಂಬನಿಯಲ್ಲಿ ...

ಇಂತಹ ಪ್ರತಿಭೆಯ ಕವಿತ್ವಕೆ ವಂದಿಸುತ ...ನಿಮ್ಮ ಸ್ನೇಹವ ಬಯಸಿಹನು ಮಲೆನಾಡ್ಗಿರಿ ಮಲೆನಾಡಲ್ಲಿ ...

ಜಯಪ್ರಕಾಶ said...

Dhanyavadagalu Giri avare...
Nimma commente ondu sogasaada padyada haagide.

Naanu saha cisco dalle work maadtha iddene. Nanna email id: jnevara@cisco.com.

Bhettiyaaguva omme.